Monday, September 22, 2008

ಸ್ನೇಹದ ಹಾದಿಯಲ್ಲಿ ನೀ ಬಂದು ........

ಸ್ನೇಹದ ಹಾದಿಯಲ್ಲಿ ನೀ ಬಂದು .....ಮರೆಯಾಗಿ ಹೋಗಿರುವೆ ನೀ ಏಕೆ ?????
ಬರೆದಿರುವೆ ನೀ ನನ್ನ ಮನದಲ್ಲಿ ಪ್ರೀತಿಯ ಚಿತ್ತಾರವ ......
ಅಳಿಸಲಾಗದ ಬಾಳಿನ ಶುಭ ಕಾಲವ .............
ಅರಳಿಸಿದೆ ನೀ ನನ್ನ ಮನದಲ್ಲಿ ಹೂವೊಂದ .... ಬಾಡದ ನಗುವೊಂದ
ಬಣ್ಣದ ಕನಸ ಕೊಟ್ಟೆ .... ಪ್ರೀತಿಯ ಸಿಹಿಯನಿಟ್ಟೆ....
ಬಾಡಿದ ಬದುಕಿಗೆ ಬೆಂದ ಮನಸಿಗೆ ಪ್ರೇಮದ ಸುಧೆಯ ಹರಿಸಿದೆ....
ಬಣ್ಣಿಸಲಾಗದು ಈ ಒಲವಿನ ಉಡುಗೊರೆಯ ... ಪ್ರೇಮದ ಕಿರುನಗೆಯ
ಕಾದಿರುವೆ ನಾ ನಿನಗಾಗಿ .... ಆ ನಿನ್ನ ಸಿಹಿಗಾಗಿ